ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೀಗೊಂದು ೨೦೧೯ ರ ಬದುಕು...!!

ಹೀಗೊಂದು ೨೦೧೯ ರ ಬದುಕು...!! ಆಚರಣೆಗೂ ಹೆಸರಂತೆ, ನಮ್ಮ ಸಂಸ್ಕೃತಿಯಲ್ಲದ ದಿನವಿದು, ಯುಗಾದಿ ನಮ್ಮ ದಿನವೆಂದು...!! ಕಿತ್ತಾಡುವುದಕ್ಕಿಂತ, ವರುಷದಲ್ಲಿ ಎರಡೆರಡು ಬಾರಿ ಹೊಸ ವರುಷದ ಆಚರಣೆ ನಮ್ಮದು ಎಂದುಕೊಂಡು ಬಿಟ್ಟರೆ , ನಾವೇ ಧನ್ಯರು ಅನಿಸುವುದಿಲ್ಲವೇ?!    ಏನಾದರೂ ಸರಿ,2019 ಕ್ಕೆ ಮೊದಲನೇ ವಿದಾಯ ಹೇಳುವ ಪರಿ ಇದು ಎಂದು ಭಾವಿಸಿ ಅದರೆಡಗಿನ ಒಲವನ್ನು ಬಿಂಬಿಸಲು, ಅಂತರಾತ್ಮದ ಆಳವನ್ನು ಸಾಲುಗಳಾಗಿಸುತ್ತಿದ್ದೇನೆ.  ನನ್ನ ಈ ಜೀವನದಲ್ಲಿ, ಈ ವರುಷವನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ, ಶುರುವಿನಿಂದಲೂ , ಅಂದುಕೊಂಡಿದ್ದೆಲ್ಲ ಅನೇರವಾಗಿ ನಡೆಯುತ್ತಲೇ ಹೋಯಿತು..! ಶ್ರಮವೆಲ್ಲ ವ್ಯರ್ಥ ಎನಿಸುವುದೇ ಮುನ್ನುಡಿಯಾಗಿ  ಹೋಯಿತು.    ತಿರುಗಿ ನೋಡಿದರೆ, ಉಸಿರು ಕಟ್ಟಿ, ಇನ್ನೇನು ಬದುಕಲಾರೆ ಎನ್ನುವಷ್ಟರ ಮಟ್ಟಿಗೆ ವಿಧಿ ನನ್ನೆಡೆಗೆ ಕುಪಿತನಾಗಿದ್ದನೆನಿಸುತ್ತದೆ, ಅಯ್ಯೋ ಪರಮಾತ್ಮ, ಕರುಳು ಕಿವುಚಿ ಬರುವಷ್ಟು ನೊಂದು, ಒಂಟಿತನ ಕಾಡಿದೆ!!    ಆ ಸಮಯದಲ್ಲಿ, ಮೌನದ ತೀವ್ರತೆ ಹೆಚ್ಚಾದಾಗ, ಕೈ ಹಿಡಿದು ನಡೆಸಿದ್ದು , ನಾ ಅತಿಯಾಗಿ ಮೆಚ್ಚಿರುವ ನಮ್ಮ ಸಾಹಿತ್ಯ!   ಮೂಕಂ ಕರ್ವಾತಿ ವಾಚಲಂ, ನನ್ನ ಜೊತೆ ಜೊತೆಗೆ ನಡೆಯುತ್ತಿರುವ ಸಂಗಾತಿ, ಸಾಹಿತ್ಯ !!      ಹೇಳುವುದಿಷ್ಟೇ , ಗೊತ್ತಿಲ್ಲದೆ ಏನೇನೋ ಸನ್ನಿವೇಶಗಳು ಬರುತ್ತವೆ, ಡಿಪ್ರೆಶನ್, ಒಂಟಿತನ ಎನ್ನುವ ಅನರ್ಥ ಪದಗಳು ಸುಮ್ಮನೆ ಜಂಟಿಯಾಗಿಬಿಡುತ್ತವೆ, ಹುಚ್ಚು ವ್ಯಸನಗಳ