ಪೋಸ್ಟ್‌ಗಳು

ಅಕ್ಟೋಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೀಗೊಂದು ನಮ್ಮದೇ ಬದುಕು...!

      ಹೀಗೊಂದು ನಮ್ಮದೇ ಬದುಕು...! ಮಾತಿಗೊಮ್ಮೆ ಬಂದು ಹೋಗುವ , "ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ " ಎನ್ನುವ ಹತಾಶ ಧ್ವನಿಯನ್ನೊಮ್ಮೆ ಅವಲೋಕಿಸಿದರೆ..., ದುಸ್ತರ ಈ ಬದುಕು ಎನ್ನುವುದೋ ಅಥವಾ ಕಾಲಕ್ಕೆ ತಕ್ಕಂತೆ ನಡಯಬೇಕು ಎನ್ನುವ ಗೊಂದಲವೋ.. ? ಅವಲೋಕಿಸಿದರೆ .., ನಾವೇ ಪುಣ್ಯವಂತರು ಎನಿಸುತ್ತದೆ.. ನಮ್ಮಲ್ಲಿ ಎಷ್ಟೋ ಪೋಷಕರು ರೈತಾಪಿ ವರ್ಗದವರು.. ಅನ್ನದಾತನ ಕಷ್ಟ ಗೊತ್ತಿದ್ದ ಅವರುಗಳು.. ವಿದ್ಯೆಯ ಭೋಗಕ್ಕೆ ನಮ್ಮನ್ನು ಹಾಕಿ, ಉದ್ಯೋಗ ಆರಿಸುವಿಕೆಯ ತೆಕ್ಕೆಗೆ ಹಾಕಿದ ಕಾಳಜೀವಂತರು..! ಆದರೂ, ನಮ್ಮ ಬಾಲ್ಯವೇ ಸುಂದರವಲ್ಲವೇ..! ನೇಗಿಲಯೋಗಿಯ ಪರಿಚಯ ಮನೇಲಿ, ಒಲೆ ಅಡಿಗೆಯ ರುಚಿ, ಬೇಕರಿ ತಿನಿಸುಗಳು.., ಯಾರಾದರೂ ಅತಿಥಿಗಳು ಬಂದಾಗ, ಹಬ್ಬ ಹರಿದಿನಗಳಲ್ಲಿ ಮಾತ್ರ...! ಪ್ರಕೃತಿ ನಿಯಮದ ನಿಗದಿಯಂತೆ ಕಾಲಕ್ಕೆ ಮಳೆ , ಬಿಸಿಲು , ಚಳಿ, ವಸಂತದ  ಆಗಮನವಿತ್ತು..! ಮಳೆಯ ಆಗಮನದಿ , ಅಜ್ಜನ ಛತ್ರಿ  ಪಡಸಾಲೆಯಲ್ಲಿ ನೇತಾಡುತಿತ್ತು.. ! ಬಿಸಿಲ ಝಳಕ್ಕೆ ,ಬೀಸಣಿಕೆಯ ತಂಪಿರುತಿತ್ತು.. ! ಚಳಿಯ ಹೊಡೆತಕ್ಕೆ ,ಅಜ್ಜಿ ನೇಯುತಿದ್ದ  ಹುಣ್ಣೆಯ ಅಂಗಿ, ಕೌದಿಯ ಬೆಚ್ಚಗಿನ ಹೊದಿಕೆ ಇರುತಿತ್ತು ..! ವಸಂತದ ಆಗಮನದಿ ಮರಗಿಡಗಳ ಚಿಗುರಿನ ಹಸಿರಿತ್ತು..! ಮನೆ ಅಂಗಳದಿ ,ಆಡಲೂ ಕುಂಟಾಬಿಲ್ಲಿ,  ಬುಗುರಿ ,ಲಗೋರಿ , ಚಿನ್ನಿದಾಂಡು, ಚೂರ್ ಚಂಡು, ಗೋಲಿಗಳ ಆಟವಿತ್ತು..! ಕತ್ತಲಾಗುವವರೆಗೆ ಆಡುವ ಸುಖವಿತ್ತು.. ತಡವಾಗಿ