ದೈತ್ಯ..

ದೈತ್ಯ..


 ಹೀಗೊಂದು ಬದುಕು...


ಚಿಕ್ಕ ಟೌನಲ್ಲಿ ನೆಲೆಸಿದ್ದ ನಾನು.. ಆಗಿನ್ನೂ  ನಗರಿಕರಣದತ್ತ ವಾಲುತಿದ್ದದ್ದು ನನ್ನೂರು .. ಸ್ಮರ್ಧಾತಕ ಯುಗದಲ್ಲಿ ಊರಿಂದ ಬೇರೆ ಊರಿಗೆ ಹೋಗಿ ಓದುವ ಪರಿಸ್ಥಿತಿ ಅದು..
    ಇಂಜಿನಿಯರಿಂಗ್  ಆಯ್ದ ನಾನು , ಅದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದದ್ದು. ಕಾಲೇಜ್ಗೆ  ಸೇರಿಸಲೆಂದು ನನ್ನೊಟ್ಟಿಗೆ ನನ್ನಣ್ಣ ಇದ್ದ.. ಅದಾಗಲೇ ಬೆಂಗಳೂರಿಗನಾಗಿದ್ದ ಅವನು, ಪ್ರತಿ ಬಾರಿ ರಜಕ್ಕೆಂದು  ಬಂದಾಗ ಅವನ ಹಾವಭಾವ , ಆಂಗ್ಲ ಭಾಷೆಯ ಪ್ರಭಾವ ಕಾಣುತ್ತಲೇ ಇತ್ತು.. ಹೀಗೆ ಯೋಚನೆ ಮಾಡುತ್ತಿದ್ದ ನನಗೆ ಬಸ್ ಹತ್ತಿಸಲು ಬಂದಿದ್ದ ನನ್ನಪ್ಪ , ಅಣ್ಣನಿಗೆ "ಮೆಜೆಸ್ಟಿಕ್ ತಲುಪಿದಾಗ ಕರೆ ಮಾಡು "ಎಂದಾಗ ,ಮೆಜೆಸ್ಟಿಕ್ಜ್ ಅಂದರೇನು ?? ಬೆಂಗಳೂರಿಗೆ ತಾನೇ ಹೋಗುತ್ತಿರುವುದು ಎಂದು ಯೋಚಿಸುತ್ತಿದ್ದ ನನಗೆ “ಮೆಜೆಸ್ಟಿಕ್ -ಮೆಜೆಸ್ಟಿಕ್ ಲಾಸ್ಟ ಸ್ಟಾಪ್ ಇಳ್ಕೊಳಿ “ಎಂದು ದಡಬಡನೆ ಓಡಾಡುತ್ತಿದ್ದ ಕಂಡಕ್ಟರ್ ಅರೆಮುಂಜಾನೆಯಲ್ಲಿ ಕಾಣಲೇ ಇಲ್ಲಾ.  ಆದರೆ ಕಿರುಚಾಟ ಮಾತ್ರ ಜೋರಾಗಿದ್ದೂ, ನನ್ನಣ್ಣ "ಬೇಗಬೇಗನೆ ಬಾ" ಎಂದು  ಎಳೆದುಕೊಂಡು ಹೋಗುತ್ತಿದಂತೆ , ಮೈ ಮೇಲೆ ಬರುತ್ತಿದ್ದ ಜನ/ಬಸ್ಸು/ಕಾರು  ಮಧ್ಯದಲ್ಲಿ "ಎಂಗ ಫೋನು / ಮೇಡಂ ಆಟೋ/ ಎಕ್ಕಡಿಕಿ ಅಂಡಿ/ ಡ್ರಾಪ್?? " ಎಂದು ಕೇಳುವ ಆಟೋದವರನ್ನು ಕಂಡು ಮುಂಜಾವಿನ ಚಳಿಯಲ್ಲೂ ಬೆವೆತೆಬಿಟ್ಟೆ.. ಅಣ್ಣ ಇಲ್ಲದಿದ್ದರೆ ಅತ್ತು ಬಿಡುವುದೊಂದೇ ಬಾಕಿ ಇತ್ತೇನೋ.
                     ಅಪ್ಪನಿಗೆ ಕರೆ ಮಾಡಿ ಅಣ್ಣ , “ಇನ್ನು ಬಿಎಂಟಿಸಿ ಹೊರಟಿಲ್ಲ, ೫:೦೦ಗಂಟೆಗೆ ಏರಿಯಾ ಬಸ್ ಸಿಗಬಹುದು “ಎಂದಾಗ, ಇಷ್ಟೊತ್ತು ಬಸ್ನಲ್ಲೇ ಬಂದೆವಲ್ಲ, ಮತ್ತೆ ಯಾವ ಕಡೆಗೆ ಎಂದಾಗ , ಎಂದು ಕಾಣದ ನಗರ ಸಾರಿಗೆ ಬಸ್ಸುಗಳ ಬಗ್ಗೆ ವಿವರಿಸಿದ್ದು, ವಿಚಿತ್ರ ವೆನಿಸಿತು , ನಡೆದುಕೊಂಡೇ ಸುತಾಡಬಹುದಾದಷ್ಟು ಸುತ್ತಳೆತೆಯ ಊರು ನನ್ನದು . ಬೆಂಗಳೂರಲ್ಲಿ ಏರಿಯಾ ಇಂದ ಏರಿಯಾ ಗೆ ಬಸ್ಸಾ ಎನ್ನುವಷ್ಟರಲ್ಲಿ , ಮುಳುಗದ ಜಗತ್ತಿನಂತೆ ಕಂಡದ್ದು,.. ನಸುಕಿನಲ್ಲಿಯ ಜನಸಾಗರ , ದೊಡ್ಡ ದೊಡ್ಡ ಲಗೇಜ್ ಗಳೂ , ಸಂಸಾರ ಸಮೇತರಾಗಿ , ಅಳುವ ಮಕ್ಕಳೊಡನೆ , ಚಾಯ್ ಚಾಯ್ ಎನ್ನುವ ಗದ್ದಲಿನಲ್ಲೂ , ನನ್ನ ಅಣ್ಣ "ಬಸ್ ಬಂತು ಬಾ" ಎಂದಾಗ ಯೋಚನಾ ಲಹರಿಯಿಂದ ಹೊರಬಂದೆ , ೧೦ ರಿಂದ ೨೦ ಬಸ್ ಗಳು ಕಪ್ಪು ಹೋಗೆ ಹೊರಬಿಡುತ್ತಲೂ , ಹೊರಡಲೂ ಅಣಿವಾಗಿ ನಿಂತದ್ದನ್ನು ಕಂಡು ಕಕ್ಕಾಬಿಕ್ಕಿಯಾದೆ , ೨೨ ಕಿಲೊಮೀಟರ್  ದೂರ ಅಂತ ತಿಳಿದಾಗ ಬೆಂಗಳೂರು ಎಷ್ಟೊಂದು ದೊಡ್ಡದು ಅನಿಸಿತು !!

  ಎಲ್ಲೆಂದರಲ್ಲಿ ನುಗ್ಗವ ವಾಹನಗಳ ಓಡಾಟವನ್ನು ಇನ್ನು ಹೆದರಿಸಿದ್ದು ನಾನು ಕುಳಿತ ಬಸ್ಸಿನ ಕಿಟಕಿಯ ಗಾಜು ಹೊಡೆದಾಗ , ನಿದ್ದೆಯಲ್ಲಿದ್ದ ನನಗೆ ಗೊತ್ತಾಗಲೇ ಇಲ್ಲ ,ಏನಾಯಿತೆಂದು  ನೋಡುವ ಸಂಯಮವು ಇರದೇ, “ದಿನ ಇದ್ದದ್ದೇ ಈ ರಾಡಿ ಬೆಂಗಳೂರಲ್ಲಿ, ತಮ್ಮ ಹಳ್ಳಿ ಊರು ಅಂದು ಕೊಂಡು ಬಂದುಬಿಡುತ್ತಾರೆ “ಎನ್ನುವ ಗೊಣಗುವಿಕೆಯಲ್ಲಿ ಬಸ್ ಮುಂದೆ ಸಾಗಿತು.. ಇವಿಷ್ಟರಲ್ಲಿ ನನ್ನ ಊರು ನನಗೆ ದೇವರಂತೆ ಕಾಣದೆ ಇರಲಿಲ್ಲಾ,
ಮೊದಲ ದಿನವೇ ಅಷ್ಟೆಲ್ಲಾ ಪಜೀತಿ ಪಟ್ಟ ನನಗೆ, ಎಲ್ಲರನ್ನು ಹೇಗೆ ಸಲಹುತ್ತಿದೆಯೋ ಹಾಗೆ ನನ್ನನ್ನು ಸ್ವೀಕರಿಸಿ ಅಭ್ಯಸಿಸಿತು , ತಿರುಗಿ ನೋಡಿದರೇ , ೭ ವರುಷ ಗಳೇ ಉರುಳಿವೆ,, ಒಂಥರಾ ನೆಮ್ಮದಿ ಇಲ್ಲದ ಬದುಕಾದರೂ , ನಮ್ಮೂರು ಕೂಗಿ ಕರೆದಂತಾದರೂ , ಬೆಂಗಳೂರು ವಾಪಸ್ಸು ಬಿಡುತ್ತಿಲ್ಲ ಎಂದು ಭಾಸವಾಗುತ್ತಿದೆ , ಇದು ನನ್ನ ಅಭಿಮತವಷ್ಟೇ ಅಲ್ಲ, ಪ್ರತಿಯೊಬ್ಬನದ್ದು ಕೂಡ ಅಲ್ಲವೇ!!!

ನನ್ನ ಪ್ರತಿ ಮಾತನ್ನು ಆಲಿಸುವ ಒಂದೆರಡು ಜೀವಗಳ ಎದುರು ಇಂದಿಗೂ ಮುಗಿಯಲಾರದ ಚರ್ಚೆ ಆಗ ಮತ್ತೆ ಈಗಿನ ಬೆಂಗಳೂರು.
    ಹೆಚ್ಚು ಮಾತಾಡುವ ನನಗೆ ಬಸ್ ಸ್ಟಾಪ್ ಅಥವಾ ಪಾರ್ಕ್ ನಲ್ಲಿ ಕಾಣುವ ಹಿರಿಯರನ್ನು ಮಾತಾಡಿಸುವ ಹವ್ಯಾಸ .. ಹೀಗೆ ಸಿಕ್ಕವರಲ್ಲಿ ಒಬ್ಬರ ಅನಿಸಿಕೆ /ಅನುಭವ ಈಗಲೂ ಕಾಡುತ್ತದೆ,” ಇಲ್ಲಿನವರ ಅಂಕಲ್ ನೀವು ?”ಅಂದು ಶುರುವಾದ ಮಾತು " ಹೌದಮ್ಮ, ಹುಟ್ಟಿ ಬೆಳೆದದ್ದು ಇಲ್ಲೇ ಕಣಮ್ಮ" ಎನ್ನುತ್ತಾ, ನನ್ನ ಪ್ರತಿಕ್ರಿಯೆಗೆ ಕಾಯದೆ , "ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ , ಬೆಂಗಳೂರನ್ನು ಉದ್ಯಾನನಗರಿ ಎಂದು ಬಿರುದುಗೊಳಿಸಿ ಅನುಭವಿಸದ ಕಾಲ ಅದು, ಬೆರಳನಕಿಯೆಷ್ಟು ವಾಹನಗಳು, ನೀವು ಹೇಳುವ ಹಾಗೆ ಹಳೆಕಾಲದ ಆಕಾರದ ಬಸ್ಸು, ಮನೆ , ಸ್ಟಾಪ್ ಬಂತು ಅಂತ ಕೂಗುವ ಮಷೀನ್ ಗಳಿರುವ ಈಗಿನ ಬಿಎಂಟಿಸಿ ಬಸ್ ಅಲ್ಲ, ಡಬಲ್ ಡೆಕ್ಕರ್ ಬಸ್ , ವಠಾರ ಪದ್ಧತಿ , ಕಣ್ಣು ಚಾಚಿದಷ್ಟು ಕಾಣುವ ಹಸಿರ ಸೆರೆ, ಇದ್ದ ವಿಧಾನ ಸೌಧ, HAL ನಮಗೆ ಪಿಕ್ಣಿಕ್ ಆಗಿದ್ದವು, ಈ ತರಹದ ಟ್ರಾಫಿಕ್ ಎನ್ನುವ ಸುಳಿವೇ ಇರಲಿಲ್ಲ” ಎನ್ನುವ ನಿಟ್ಟುಸಿರು ಅನಾಯಾಸವಾಗಿ ಬಂದಾಗ, ಅರಿಯದೆ ಬೆಂಗಳೂರಿನ ದುಸ್ತರವನ್ನೇ ಅವರ ಮೂಲಕ ವಿವರಿಸಿತು


ಚಿಕ್ಕ ಪೇಟೆ, ಬಳೆ ಪೇಟೆ, ಕೆ ರ್ ಮಾರ್ಕೆಟ್ನಲ್ಲಿ ನಡೆಯುವಾಗ ಕನ್ನಡ ಪದಗಳು ಕಿವಿಗೆ ಬಿದ್ದಾಗ , ತಿರುಗಿ ನೋಡುವಷ್ಟು ಆಶ್ಚರ್ಯದ ಎಲ್ಲೆವರೆಗೂ ತಲುಪಿದ್ದೇವೆ ಅಲ್ಲವೇ, ರಸ್ತೆ ಬದಿಯ ಫುಟ್ಪಾತ್ ಮೇಲೆ ಹಾಕಿರುವ ಕಾಡ್ಗಲ್ ಸವಕಳಿಯ ಮೇಲೆ ಬದಲಾಯಿಸುತ್ತಾರಂತೆ ಎಂದಾಗ, ಇಲ್ಲಿಯ ಜನಸಂಖ್ಯೆ ಎಷ್ಟು ಎನ್ನುವ ಪ್ರಶ್ನೆ ಕಾಡದೆಬಿಡದು.

ಸೀಸನ್ ಅನ್ನುವುದೇ ಇಲ್ಲ ಇಲ್ಲಿ, ಯಾವಾಗಲಾದರೂ ಏನು ಬೇಕಾದರೂ ಸಿಗುತ್ತದೆ ಇಲ್ಲಿ, ಊರ ಮನೆ ಮುಂದೆ ಸಿಗುವ ಬೇವಿನ ಸೊಪ್ಪು, ಮಾವಿನಸೊಪ್ಪು, ಗರಿಕೆ ಇಲ್ಲಿ ಮಾರಾಟಕ್ಕಿವೆ, ದುಡ್ಡಿದ್ದರೆ ದುನಿಯಾ ಎನ್ನುವಂತೆ ಈ ಊರು.

ಧರ್ಮಶಾಲಾ, ತಂಗುದಾಣದ ಪರಿಕಲ್ಪನೆಯಲ್ಲಿ ಈಗ ಕಾಂಕ್ರೀಟ್ ಮತ್ತೆ ಲೈಟ್ಸ್ ನಡುವೆ ಅತ್ಯಾಕರ್ಶಣೀಯ ಲಾಡ್ಜ್-ಹೋಟೆಲ್ ಆಗಿರುವ ಕಾರಣ ಎಲ್ಲಿಯೂ ಕನ್ನಡವೇ ಇಲ್ಲಾ, ವಠಾರ ಪದ್ದತಿಯೇ ಮಾಸಿ ಅಪಾರ್ಟ್ಮೆಂಟ್ ಎನ್ನುವುದಕ್ಕೆ ಬಂದಿವೆ . ಎಲ್ಲಿ ನೋಡಿದರೂ ಕಾಂಕ್ರೀಟ್ , ಬರಿ ಪಾದಕ್ಕೆ ಮಣ್ಣಿನ ಸ್ಪರ್ಶವೇ ಕಾಣದಂತಾಗಿದೆ . ಸೂರ್ಯನು ನುಗ್ಗಲು ಆಗದಂತಹ ಕಾಮಗಾರಿ ಕಟ್ಟಡಗಳು, ಉದ್ಯೋಗ ಆರಿಸಿ ಬಂದ ಎಷ್ಟೋ ಜನರು ಇಲ್ಲೇ ಕಾಯಂಆಗಿ ನೆಲೆಸಿದ್ದಾರೆ , ಅದು ಯಾರ ಪ್ರಭಾವವೋ ಏನೋ, ತಾವಾಡಿ ಬಂದ ಎಷ್ಟೋ ಜನರು, ತಾವು ಅನುಭವಿಸಿದ  ಅಲ್ಪ ಅವಕಾಶಗಳನ್ನು ನೆನೆದು , ನಮ್ಮ ಮಕ್ಕಳು ನಮ್ಮಂತೆ ಊರಿಂದ ಊರಿಗೆ ಬರುವುದು ಬೇಡ, ಅವರು ಚೆನ್ನಾಗಿರಲಿ ಎನ್ನುವ ಮೌಢ್ಯತೆಯಲ್ಲಿ ಪಾಶ್ಯಾತ್ಯಕ್ಕೆ ವಾಲುತ್ತಿದ್ದಾರೆ, ಈಗಿನ ಪೀಳಿಗೆಗೆ ಚಿನ್ನಿದಾಂಡು, ಬುಗುರಿ, ಲಗೋರಿ, ಚೂರ್ಚೆಂಡು ಆಡಿದ್ದೇ ಕಂಡಿಲ್ಲ ನಾನು, ಎಲ್ಲಾರೂ ಮೊಬೈಲ್ ಎಂಬ ಮಂತ್ರಕ್ಕೆ ಮಾರಿ ಹೋಗಿದ್ದಾರೆ. ಬೇಸಿಗೆ ರಜೆ ಎಂಬ ಕುತೂಹಲ ಇವರಲ್ಲಿ ಇಲ್ಲಾ, ಏಕೆಂದರೆ, ದುಡ್ಡು ಕೊಟ್ಟರೆ ಎಲ್ಲಾ ಸಿಗುವ ಈ ಊರಿನ ಹೊಂದಿಕೆ  ಹೇಗಿದೆ ಅಂದರೆ, ಇಲ್ಲಿಯವರು ಬೇರೆ ದೇಶ ನೋಡಲು ಬಯಸುವವರೇ ವಿನಃ , ಇವರು ಬಯಸಿದ ಅನುಕೂಲ ಹುಟ್ಟೂರಲ್ಲಿಇಲ್ಲದ್ದನ್ನು ನೆನೆದು ಹೋಗುವುದೇ ಇಲ್ಲ, ಇವೆಲ್ಲವೂ ಈಗ ಸಾಮಾನ್ಯವಲ್ಲವೇ ಮರೆತು ಹೋದ ಅಜ್ಜಿ ಮನೆ ಎನ್ನುವ ಸಂಭಂದಗಳಲಿ ....!!

ಶಿವನೇ ಬಲ್ಲ ಸ್ವಾಮಿ .. ಬೆಂಗಳೂರು ಬೆಳೆದಂತೆಲ್ಲ ಅದೇಕೋ ಕನ್ನಡ ಕಾಣೆಯಾಗುತ್ತಿದೆ , ಕನ್ನಡವನ್ನು ನುಂಗುವ ಧೈತ್ಯದಂತೆ ಬೆಳೆಯುತ್ತಿದೆ ..   ಪರದೇಶಗಳಲ್ಲಿ ಇದ್ದಾಗ ಕನ್ನಡ ಮಾತನಾಡುವವರು ಸಿಕ್ಕಾಗ ಆಗುವ ಖುಷಿ ನನಗೆ ಇಲ್ಲಾಗುತ್ತದೆ, ಗೊತ್ತಿಲ್ಲದೇ ಆಂಗ್ಲ , ತೆಲುಗು, ತಮಿಳು,ಹಿಂದಿ ರಕ್ತವನ್ನು ಸೇರುತ್ತಿವೆ.
           ಒಂದೇ ಚಾವಣಿಯ ಮನೆ ಎಲ್ಲಿಯೂ ಕಾಣುತ್ತಿಲ್ಲ, ಗಗನ ಚುಂಬಿ ಕಟ್ಟಡಗಳು , , ಮಳೆ ಬಂತೆದರೆ ರಸ್ತೆಯನ್ನೇ ಜಲಾವೃತಗೊಳಿಸುವಂತೆ   ಕಾಲುವೆಯಂತೆ ಹರಿಯುವ ಕಪ್ಪು ನೀರು, ಎಲ್ಲೆಲ್ಲೂ ಕಾಣುವ ಟಾರು, ಡಾಂಬರ್, ಭೂತಾಯಿಗೆ ನೀರುಣಿಸದಷ್ಟು ಸಿಮೆಂಟ್ ನ ಮಿಶ್ರಣ , ಮಾನವೀಯತೆ ಮರೆತಿರುವ ಯುಗದಲ್ಲಿ, ಹಣಬೆಯಂತೆ ಹುಟ್ಟುತ್ತಿರುವ ಸೇವಾಶ್ರಮಗಳು.. ಎಷ್ಟೋ ಜನರ ತಂದೆ ತಾಯಿಗಳ ತವರಂತಾಗಿವೆ ಇವು,, ಅಪಾರ್ಟ್ಮೆಂಟ್ ನ ಸೆಕ್ಯೂರಿಟಿ ಗಾರ್ಡ್, ದುಡಿಯುವ ಸಲುವಾಗಿ ಮನೆಯಲ್ಲೇ ಬಿಟ್ಟು ಹೋಗುವ ಪುಟ್ಟ ಕಂದಮ್ಮನನ್ನು ಕಾಯುವ ಆಯಿಗಳನ್ನು ನಂಬುವ ಇವರು, ಹೆತ್ತ ತಂದೆ ತಾಯಿಗಳನ್ನೇ ದೂರ ಇಡುವ ಸಂಸ್ಕೃತಿ ಈಗ.

   ಶೇಖಡ ೯೦% ಬೆಂಗಳೂರಿಗರು ಎನಿಸಿಕೊಂಡವರೂ ಯಾರೂ ಇಲ್ಲಿ ಹುಟ್ಟಿ ಬೆಳೆದಿಲ್ಲಾ, ಓದಲು, ದುಡಿಯಲು , ನಗರೀಕರಣದ ಪ್ರಭಾವಕ್ಕೆ ಒಳಗಾದವರೂ ಬಂದು ಇಲ್ಲಿ ನೆಲೆಸಿರುವುದೇ ಹೆಚ್ಚು.
           ಮನೆಯಿಂದ ಬೇಗ ಹೊರಡ್ಬೇಕು, ೫ ನಿಮಿಷ ತಡವಾದರೆ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಳ್ಳಬಹುದೆಂದು  ದಡಬಡನೆ ಎದ್ದು, ತಲೆಸ್ನಾನ ಮಾಡಿ , ಕೂದಲನ್ನು ಆರಿಸಿಕೊಳ್ಳದೆ , ಬೆಳಗಿನ ಉಪಹಾರವನ್ನು ಬಿಎಂಟಿಸಿ ಅಲ್ಲಿ ತಿನ್ನುವುದು ಅತಿ ಸಾಮಾನ್ಯ ವಿಷಯ.
             ಊರಲ್ಲಿ ಆದರೆ, ಅಜ್ಜಿ, ಅಮ್ಮ, ಅತ್ತೆ, ಚಿಕ್ಕಮ್ಮ ರ ಹಾರೈಕೆಯೊಡನೆ , ಅವರ ಕೈರುಚಿ , ಶುದ್ಧ ಗಾಳಿ, ಆಹಾ!!ಎನಿಸುತ್ತೆ . ಎಲ್ಲಾ ಇದ್ದೂ, ಏಲ್ಲರಿಂದ ದೂರ ಮಾಡುತ್ತಿರುವ ಈ ಊರು ಪರದೇಶಿಗಳಂತಾಗಿರುವ ನಮ್ಮ ಪಾಡು ಶೋಚನೀಯ ಅಲ್ಲವೇ !!
               ದಿನೇ ದಿನೇ ದುಬಾರಿಯಾಗುತ್ತಿರುವ ಊರಲ್ಲಿ, ದೊಡ್ಡ ದೊಡ್ಡ ಮಾಲ್ ಗಳಲ್ಲಿ ತುಟಿ ಬಿಚ್ಚದೆ ಸಾವಿರ ಸಾವಿರ ಕಟ್ಟುವ ಈ ಜನರು, ರಸ್ತೆ ಬದಿಯ ಪುಡಿಯಾಸಿಗೆ ಚೌಕಾಸಿ ಮಾಡುವುದು ಎಂತಹ ಧೋರಣೆ ಅಲ್ಲವೇ??

ಮಾಧ್ಯಮ ವರ್ಗದ ಜನರು , ಮಕ್ಕಳು ಎಲ್ಲರಂತೆ ಓದಲಿ ಎಂದು ಇಲ್ಲಿಗೆ ಕಳುಹಿಸಿ ಲಕ್ಷ ಲಕ್ಷ ಹಾಸ್ಟೆಲ್ ಫೀಸ್ ಕಟ್ಟಲಾಗದೆ ಡಿವೈಡೆಡ್ ರೂಮ್ ಮಾಡಿಕೊಂಡು, ಅಳತೆಯಲ್ಲಿ ಬದುಕುವವರಿಗೆ ರಸ್ತೆಬದಿ ಸಿಗುವ ತಳ್ಳೋ ಗಾಡಿಯಾ  ರುಚಿಮುಂದೆ ಫೈವ್ ಸ್ಟಾರ್ ಯಾಕೆ ಹೇಳಿ..
   ಈ ಧೈತ್ಯವೇ ಹೀಗೆ, ಎಲ್ಲರನ್ನು ಸಾಕುತ್ತಿದೆ , ನಮ್ಮ ಅಳತೆಯನುಸಾರವಾಗಿ ನಮ್ಮ ಜೀವನ ಸಾಗಿಸುವ ಪ್ರತಿ ಆಯ್ಕೆ ಕಣ್ಣ ಮುಂದೆ ಒಡ್ಡುತ್ತದೆ . ಒಮ್ಮೆ ಇಲ್ಲಿಗೆ ಕಾಲಿಟ್ಟರೆ ಸಾಕು ರಾಕ್ಷಸನಂತೆ ನಮ್ಮ ಊರಿನ ನೆನಪನ್ನು ಮರೆಸಿ ತನ್ನ ಒಡಲಲ್ಲಿಟ್ಟುಕೊಂಡು ಸಾಕುವ ದೇವರಂತೆ ಕಂಡರೂ  ಅವನೊಬ್ಬ ಅತಿದೊಡ್ಡ ರಾಕ್ಷಸನೇ !!

ಓದಲು , ದುಡಿಯಲು ಬಂದು ನಮ್ಮ ಕೆಲಸ ಮುಗಿಸಿ  ಒಳ್ಳೆ ಸಂಪಾದನೆ ಮಾಡಿ ವಾಪಸ್ಸು ಊರಿಗೆ ಹೋಗಿ ಅಲ್ಲಿಯೇ ಸಂಭದಗಳೊಡನೆ ಬದುಕು ಕಟ್ಟಿಕ್ಕೋಳ್ಳೋಣ ಎಂದು ಬಂದವರೇ ಹೆಚ್ಚು, ತಿಂಗಳ ಆರಂಭದಲ್ಲಿ ಇರುವ ಚಿಕ್ಕ  ಜಾಗಕ್ಕೂ ಸಾವಿರ ಸಾವಿರ ಬಾಡಿಗೆ ಕೊಡುವ ಕೈ , ಊರಿನ ಸ್ವಂತ ಮನೆಯನ್ನು ಮೆಟ್ಟಿದ ನೆನಪು, ಒಡಲಾಳದ ಕಟ್ಟೆಯನ್ನೇ ಹೊಡೆಯುತ್ತಲ್ಲವೇ ..
    ಈ ಮಾಲಿನ್ಯ , ಟ್ರಾಫಿಕ್, ದುಬಾರಿ, ಸಂಭದಗಳ ಬೆಲೆಯೇ ಇರದ ಯಾಂತ್ರಿಕತೆಯನ್ನು ನೆನೆದು ಈ ಊರೇ ಬೇಡ ಎಂದುಕೊಂಡವರು ಮುಪ್ಪು ಕಾಣುತ್ತಿದ್ದರೂ , ವಾಪಸ್ಸಾಗದೇ ಇಲ್ಲೇ ಇದ್ದಾರೆ !!
    ನಾನು ಕಂಡ ಪ್ರತಿಯೋರ್ವನದ್ದು ಇದೆ ನೋವು.. ರಜೆಕ್ಕಾಗಿ ಹಾತೊರೆಯುವ ಮನಸ್ಸುಗಳ ನಡುವೆ, ರಜೆಯೇ ಸಂಧರ್ಭದಲ್ಲಿ ಖಾಸಗಿ ಬಸ್ ಗಳ ದರ ಗಗನಕ್ಕೆ ಏರಿದರೂ , ಊರನ್ನು ಕಾಣುವ ತವಕದಲ್ಲಿ ಪ್ರಪಂಚದ ಬಿಸಿನೆಸ್ ಮೈಂಡ್ ಅರಿಯುವ ತಾಳ್ಮೆ ಯಾರಿಗಿದೆ,
ರಜೆ ಮುಗಿದು ವಾಪಸ್ಸಾಗುವ ವೇಳೆಯಲ್ಲಿ, ಗಂಡು ಹೆಣ್ಣು ಎನ್ನುವ ಎಕ್ಕೆಯಿಲ್ಲದೆ.. ಕಣ್ಣೀರ ಕೋಡಿಯನ್ನು, ಅದೆಷ್ಟು ಬೆಂಗಳೂರಿಗೆ ಧಾವಿಸುವ ಬಸ್ ಗಳು ಕಂಡಿವೆಯೋ ಏನೋ!!!


ಬೇಯುತ್ತಿರುವ ಮನಸ್ಸುಗಳು, ದಣಿದು ಸುಸ್ತಾಗಿ ಬಂದು ಯಾಂತ್ರಿಕತೆಯ ಸೇತುವೆಯಾ ಅಡಿಯಲ್ಲಿ ಅಮ್ಮನೊಡನೆ ಮಾತಾಡಿ, ಅದೇ ಗುಂಗಿನಲ್ಲಿ ದಿಂಬಿಗೊರೆಗಿದಾಗ , ಅಮ್ಮನನ್ನು ಎಂದು ಸೇರುವೆ ಎನ್ನುವ ಚಿಂತೆ ಆವರಿಸಿದರೂ , ದೂರದಲ್ಲೆಲ್ಲೋ ಕುಹಕ ನಗೆಯಾಡಿಸುತ್ತ ಇನ್ನೂ ಬೆಳೆಯುತ್ತಿದ್ದಾನೆ ಈ ಬೆಂಗಳೂರೆಂಬ ಧೈತ್ಯ ..

....
ಈ ಧೈತ್ಯನಿಗೆ ಶಬ್ದ ರೂಪಕೊಡುವಾಗ... ಏನೋ ಒಂಟಿತನ ನನ್ನನು ಕಾಡಿತು...

ಬಯಸಿದೆ ಅಪ್ಪ-ಅಮ್ಮನ ಮಡಿಲನ್ನು.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೀಗೊಂದು ೨೦೧೯ ರ ಬದುಕು...!!

ನನ್ನಪ್ಪನ ಕ್ಯಾಮೆರಾ..