ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೈತ್ಯ..

ದೈತ್ಯ..  ಹೀಗೊಂದು ಬದುಕು... ಚಿಕ್ಕ ಟೌನಲ್ಲಿ ನೆಲೆಸಿದ್ದ ನಾನು.. ಆಗಿನ್ನೂ  ನಗರಿಕರಣದತ್ತ ವಾಲುತಿದ್ದದ್ದು ನನ್ನೂರು .. ಸ್ಮರ್ಧಾತಕ ಯುಗದಲ್ಲಿ ಊರಿಂದ ಬೇರೆ ಊರಿಗೆ ಹೋಗಿ ಓದುವ ಪರಿಸ್ಥಿತಿ ಅದು..     ಇಂಜಿನಿಯರಿಂಗ್  ಆಯ್ದ ನಾನು , ಅದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದದ್ದು. ಕಾಲೇಜ್ಗೆ  ಸೇರಿಸಲೆಂದು ನನ್ನೊಟ್ಟಿಗೆ ನನ್ನಣ್ಣ ಇದ್ದ.. ಅದಾಗಲೇ ಬೆಂಗಳೂರಿಗನಾಗಿದ್ದ ಅವನು, ಪ್ರತಿ ಬಾರಿ ರಜಕ್ಕೆಂದು  ಬಂದಾಗ ಅವನ ಹಾವಭಾವ , ಆಂಗ್ಲ ಭಾಷೆಯ ಪ್ರಭಾವ ಕಾಣುತ್ತಲೇ ಇತ್ತು.. ಹೀಗೆ ಯೋಚನೆ ಮಾಡುತ್ತಿದ್ದ ನನಗೆ ಬಸ್ ಹತ್ತಿಸಲು ಬಂದಿದ್ದ ನನ್ನಪ್ಪ , ಅಣ್ಣನಿಗೆ "ಮೆಜೆಸ್ಟಿಕ್ ತಲುಪಿದಾಗ ಕರೆ ಮಾಡು "ಎಂದಾಗ ,ಮೆಜೆಸ್ಟಿಕ್ಜ್ ಅಂದರೇನು ?? ಬೆಂಗಳೂರಿಗೆ ತಾನೇ ಹೋಗುತ್ತಿರುವುದು ಎಂದು ಯೋಚಿಸುತ್ತಿದ್ದ ನನಗೆ “ಮೆಜೆಸ್ಟಿಕ್ -ಮೆಜೆಸ್ಟಿಕ್ ಲಾಸ್ಟ ಸ್ಟಾಪ್ ಇಳ್ಕೊಳಿ “ಎಂದು ದಡಬಡನೆ ಓಡಾಡುತ್ತಿದ್ದ ಕಂಡಕ್ಟರ್ ಅರೆಮುಂಜಾನೆಯಲ್ಲಿ ಕಾಣಲೇ ಇಲ್ಲಾ.  ಆದರೆ ಕಿರುಚಾಟ ಮಾತ್ರ ಜೋರಾಗಿದ್ದೂ, ನನ್ನಣ್ಣ "ಬೇಗಬೇಗನೆ ಬಾ" ಎಂದು  ಎಳೆದುಕೊಂಡು ಹೋಗುತ್ತಿದಂತೆ , ಮೈ ಮೇಲೆ ಬರುತ್ತಿದ್ದ ಜನ/ಬಸ್ಸು/ಕಾರು  ಮಧ್ಯದಲ್ಲಿ "ಎಂಗ ಫೋನು / ಮೇಡಂ ಆಟೋ/ ಎಕ್ಕಡಿಕಿ ಅಂಡಿ/ ಡ್ರಾಪ್?? " ಎಂದು ಕೇಳುವ ಆಟೋದವರನ್ನು ಕಂಡು ಮುಂಜಾವಿನ ಚಳಿಯಲ್ಲೂ ಬೆವೆತೆಬಿಟ್ಟೆ.. ಅಣ್ಣ ಇಲ್ಲದಿದ್ದರೆ ಅತ್ತು ಬಿಡುವುದೊಂದೇ ಬಾಕಿ ಇತ್