ಪೋಸ್ಟ್‌ಗಳು

ಜೂನ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾ ಕಂಡ ಕುಪ್ಪಳ್ಳಿ..

ಇಮೇಜ್
ನಾ ಕಂಡ ಕುಪ್ಪಳ್ಳಿ.. ಕನ್ನಡ-ಕವಿಗಳು , ಸಾಹಿತ್ಯ ಎಂದರೆ ನನ್ನೊಳಗಿನ ಪುಟ್ಟ ಹೃದಯದಲ್ಲಿ ಅದೇನೋ ಮಾರ್ಧ್ವನಿ.. ಕದನ ಮುಕ್ತಾಯದ ಕೌತುಕವಷ್ಟು  ಆತುರಾತುರವಾಗಿ ಕನ್ನಡ ಪುಸ್ತಕ ಓದಿ ಮುಗಿಸುವಷ್ಟು ಅಭಿಮಾನ.                         ಬಯಲುಸೀಮೆಯವಳಾದ ನನಗೆ, ಅದೇಕೋ ಮಲೆನಾಡಿಗೆ ಶಿರಶಾಸ್ಟಾಂಗ ನಮಸ್ಕಾರ  ಮಾಡಿ, ಮೈಮರೆತಿರುವ ಅತೀವ ಭಕ್ತನ ಒಡಲಾಳದ ಮನಸ್ಸಿನಂತೆ...      ಪೂರ್ಣ ಚಂದ್ರ ತೇಜಸ್ವಿ ನನ್ನ ಆರಾಧ್ಯ ದೈವ. ಅವರು ನನ್ನ ಪುಸ್ತಕ ಪ್ರೇಮವನ್ನು ಹಿಡಿದಿಟ್ಟಿರುವ ಮಹಾನ್ ದೈತ್ಯ.,  ನನಗಷ್ಟೇ  ಅಲ್ಲಾ , ಪ್ರತಿ ಕನ್ನಡಿಗನನ್ನು  ಕೂಡ!, ಏಕೆಂದರೆ ಅವರ ವ್ಯಕ್ತಿತ್ವವೇ ಹಾಗೆ..     ಅಪ್ಪನಂತೇ ಅಲ್ಲಾ ಅವರು!!    ಅವರ 'ಪರಿಸರದ ಕತೆಗಳು' ಓದುವಾಗ ಕಣ್ಣ ಮುಂದೆ ಹಾದುಹೋಗುವ ಸಾಹಿತ್ಯದ ಚಿತ್ರಣ ಕಂಡು, ಒಬ್ಬ ಮನುಷ್ಯ ಹೀಗೆಲ್ಲಾ ಬರೆಯಲು ಹೇಗೆ ಸಾಧ್ಯವೆಂದಾಗ , ನಾನ್ನುಡಿಯಂತೆ 'ಅಪ್ಪ ಹಾಕಿದ ಹಾಲದ ಮರದಂತೆ' ಇರಬಹುದೇನೋ , ಆದರೆ ಆಲದ ಮರದ ಬೇರಲ್ಲಿ, ಕಾಡಿನ ಔಷದಿ ಚಿಗುರೊಡೆದದ್ದು ಹೇಗೆ? ಎಂದು ಕೂಡ ಅನ್ನಿಸಿ ತರಾಟೆ ಯಾಕೆ., ಅಪ್ಪ-ಮಗನ ಸಾಹಿತ್ಯದ ದೇಣಿಗೆ ..ಕನ್ನಡ ನಾಡು ಸವಿದರು ಸಾಲದ ಕುಡಿಕೆ ಹೊನ್ನನ್ನು , ಅವರಿಬ್ಬರ  ಕಣ್ಣಲ್ಲಿ ಕಂಡ ಜಾಗ-ಯುಗದ ರಚನೆಯನ್ನು ಓದೋಣ ಎಂದು ಭಾವಿಸಿ , ಕುವೆಂಪುರವರ ಮಲೆಗಳಲ್ಲಿ ಮದುಮಗಳನ್ನು ಓದಿದೆ, ಆದರೆ ತೇಜಸ್ವಿ ಅವರ ಜುಗಾರಿ ಕ್ರಾಸ್ ಸಾಹಿತ್ಯಕ್ಕ್ಕೂ, ಕು