ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನಪ್ಪನ ಕ್ಯಾಮೆರಾ..

ಇಮೇಜ್
ನನ್ನಪ್ಪನ ಕ್ಯಾಮೆರಾ.. ನಾನು ಹುಟ್ಟಿದ್ದು ಬಳ್ಳಾರಿಯ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ.. ನನ್ನನ್ನು ಸ್ವಾಗತಿಸಲು ಅಮ್ಮ-ಅಕ್ಕಪಕ್ಕದ ಮನೆಯ ಅಜ್ಜಿಯಂದಿರು , ಆರು ವರುಷದ ಅಣ್ಣ ಹಾಗೂ ಮೂರು ವರುಷದ ಅಕ್ಕ ಇದ್ದರಂತೆ. ಅಪ್ಪ ಪರೀಕ್ಷೆ ಮೇಲ್ವಿಚಾರಕರಾಗಿ ಕೆಲಸಕ್ಕೆ ಹೋಗಿದ್ದರಂತೆ .. ಅಪ್ಪ ಎಂದೂ ರಜೆ ಹಾಕಿದವರಲ್ಲಾ.. ಅಣ್ಣನ ಶಾಲೆಯ ಹಾಜಾರಾತಿ ಕೂಡ ಹಾಗೆ ಇರಬೇಕೆಂದವರು .. ಪುಟ್ಟ ತಂಗಿ ಬರುವಳೆಂದೆಣಿಸಿ ಪುಟ್ಟ ಯಜಮಾನ-ನನ್ನಣ್ಣ ಶಾಲೆಗೆ ಹೋಗಲಿಲ್ಲವಂತೆ , ಮೂವತ್ತು ವರುಷ ಅವನಿಗೀಗ ..ಈಗಲೂ ಚುಡಾಯಿಸುತ್ತಾನೆ ..ನೀನು ಹುಟ್ಟಿ ನನ್ನ 100 % ಹಾಜಾರಾತಿ ತಪ್ಪಸಿದೆಯೆಂದು ..ಮಹಾನುಭಾವ, ನನ್ನನ್ನು  ಹಾಗೆ ಬೆಳೆಸಿದ್ದಾನೆ , ರಜೆ  ಹಾಕಿದರೆ ದೊಡ್ಡ ತಪ್ಪು ಎನ್ನುವಂತೆ . 108 ದೇವರಿಗೂ ಪ್ರಶ್ನಿಸಿ -ಕೈ ಮುಗಿದು ಇಬ್ಬರು ಕಾರ್ಪೊರೇಟ್ ಕೆಲಸದಲ್ಲಿ ಅನಿವಾರ್ಯ ಇದ್ದಾಗ ರಜೆ ತೆಗೆದುಕೊಳ್ಳುತ್ತೇವೆ...          ಮನೆಯಲ್ಲಿ ಚಿಕ್ಕವಳಾಗಿದ್ದರಿಂದ ಅಪ್ಪ-ಅಮ್ಮನಿಗೆ ಹೆಚ್ಚು ಮುದ್ದು  ನಾನು , ಆದರೆ ಈ 6-3 ವರುಷದ ಕಿಲಾಡಿಗಳಿದ್ದರಿಂದ ನನ್ನ ಜಗತ್ತು ಹೀಗೆ ಎಂದು ನಿರ್ಧಾರವಾಗಿತ್ತು ..ಅಣ್ಣ ಹೇಳಿದಂತೆ ನಡೆಯಬೇಕಾದ ನಿಯಮ ರಚಿಸಿಯಾಗಿತ್ತು ..ನನಗಂತ ಹೆಚ್ಚು ಆಟಿಕೆ ಏನೂ ಇರಲಿಲ್ಲ , ಅವರಾಡಿದ ತೊಟ್ಟಿಲು -ಮುರಿದ ಆಟಿಕೆಗಳು ಮಾತ್ರ.. ನಾನು ಹೇಗಿದ್ದೆ ಅಂತ ಈಗಲೂ ಅಷ್ಟು ನೆನಪಾಗುವುದಿಲ್ಲ ,ಆದರೆ ಮನೆಯಲ್ಲಿದ್ದ ಅಪ್ಪನ ಪುಟ್ಟ ಕ್ಯಾಮೆರಾ ನಮ್ಮ